ಇಂಡಿಯನ್ ಕೋ ಆಪರೇಟಿವ್ ರಿವ್ಯು
ನ್ಯಾಷನಲ್ ಕೋ ಆಪರೇಟಿವ್ ಯೂನಿಯನ್ನಿನಿಂದ ಮೂರು ತಿಂಗಳಿಗೊಮ್ಮೆ ಪ್ರಕಟವಾಗುವ ಪತ್ರಿಕೆ. ಭಾರತದಲ್ಲಿ ಮತ್ತು ವಿದೇಶಗಳಲ್ಲಿ ನಡೆಯುತ್ತಿರುವ ಸಹಕಾರಿ ರಂಗದ ಪ್ರಗತಿ ಚಿತ್ರ. ಸಹಕಾರಿ ರಂಗದಲ್ಲಿ ನಡೆಯುವ ಸಂಶೋಧನೆ ಮುಂತಾದುವನ್ನು ಕುರಿತು ಉನ್ನತ ಮಟ್ಟದ ಪ್ರಬಂಧಗಳನ್ನು ಈ ತ್ರೈಮಾಸಿಕ ಪತ್ರಿಕೆಯಲ್ಲಿ ಪ್ರಕಟಿಸಲಾಗುತ್ತಿದೆ. ಈ ಪತ್ರಿಕೆಯನ್ನು 1965ರಲ್ಲಿ ಪ್ರಾರಂಭಿಸಲಾಯಿತು. ಕೇಂದ್ರ ಕಚೇರಿ ನವದೆಹಲಿ.
(ನೋಡಿ- ನ್ಯಾಷನಲ್-ಕೊ---ಆಪರೇಟಿವ್-ಯೂನಿಯನ್-ಆಫ್-ಇಂಡಿಯ)				
	(ಸಿ.ಕೆ.ಆರ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ